S Shorts

Court Recruitment | ಮೈಸೂರು ಜಿಲ್ಲಾ ನ್ಯಾಯಾಲಯದಲ್ಲಿ ಭರ್ಜರಿ ಉದ್ಯೋಗಾವಕಾಶ: ಇಂದೇ ಅರ್ಜಿ ಸಲ್ಲಿಸಿ

Court Recruitment | ಮೈಸೂರು ಜಿಲ್ಲಾ ನ್ಯಾಯಾಲಯದಲ್ಲಿ ಭರ್ಜರಿ ಉದ್ಯೋಗಾವಕಾಶ: ಇಂದೇ ಅರ್ಜಿ ಸಲ್ಲಿಸಿ
Author: Meghana Gowda
Posted By: Meghana Gowda
Updated: May 8, 2026 | 5:06 PM

ಮೈಸೂರು: ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಮೈಸೂರು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಕಚೇರಿಯು ಸಿಹಿಸುದ್ದಿ ನೀಡಿದೆ. ಮೈಸೂರು ನ್ಯಾಯಾಂಗ ಘಟಕದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಹುದ್ದೆಗಳ ವಿವರ:

ಒಟ್ಟು 93 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಅವುಗಳ ವಿವರ ಹೀಗಿದೆ:

  • ಶೀಘ್ರಲಿಪಿಗಾರ ಗ್ರೇಡ್–III: 04 ಹುದ್ದೆಗಳು

  • ಬೆರಳಚ್ಚು ನಕಲುಗಾರರು: 03 ಹುದ್ದೆಗಳು

  • ಆದೇಶ ಜಾರಿಕಾರರು: 11 ಹುದ್ದೆಗಳು

  • ಸೇವಕರು (Peon): 75 ಹುದ್ದೆಗಳು

ಅರ್ಜಿ ಸಲ್ಲಿಸುವ ವಿಧಾನ ಮತ್ತು ದಿನಾಂಕ:

ಆಯ್ಕೆ ವಿಧಾನ:

ನೇಮಕಾತಿ ಪ್ರಕ್ರಿಯೆಯು ಲಿಖಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ (Skill Test) ಮತ್ತು ಸಂದರ್ಶನ ಅಥವಾ ದಾಖಲೆ ಪರಿಶೀಲನೆಯ ವಿವಿಧ ಹಂತಗಳನ್ನು ಒಳಗೊಂಡಿರಲಿದೆ. ಅಭ್ಯರ್ಥಿಗಳ ಆಯ್ಕೆಯನ್ನು ಸಂಪೂರ್ಣವಾಗಿ ನಿಯಮಾನುಸಾರ ಹಾಗೂ ಪಾರದರ್ಶಕವಾಗಿ ನಡೆಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.