S Shorts

ದೇವನಹಳ್ಳಿ ಬೈಪಾಸ್‌ನಲ್ಲಿ ಭೀಕರ Hit ಅಂಡ್ Run: ರಸ್ತೆ ದಾಟುತ್ತಿದ್ದ ಕ್ಯಾಂಟರ್ ಚಾಲಕ ದುರ್ಮರಣ!

ದೇವನಹಳ್ಳಿ ಬೈಪಾಸ್‌ನಲ್ಲಿ ಭೀಕರ Hit ಅಂಡ್ Run: ರಸ್ತೆ ದಾಟುತ್ತಿದ್ದ ಕ್ಯಾಂಟರ್ ಚಾಲಕ ದುರ್ಮರಣ!
Author: Sagaradventure
Posted By: Sagaradventure
Updated: Jul 24, 2026 | 10:52 AM

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಹೊರವಲಯದ ಬೆಂಗಳೂರು-ಹೈದರಾಬಾದ್ ಹೆದ್ದಾರಿ 44ರ ಬೈಪಾಸ್‌ನಲ್ಲಿ ತಡರಾತ್ರಿ ಭೀಕರ ಹಿಟ್ ಅಂಡ್ ರನ್ ಪ್ರಕರಣ ವರದಿಯಾಗಿದೆ. 

ರಾಮನಗರ ಮೂಲದ ಕ್ಯಾಂಟರ್ ಚಾಲಕ ಜಯಪ್ರಕಾಶ್ (37) ಮೃ*ತಪಟ್ಟ ದುರದೃಷ್ಟಕರ ವ್ಯಕ್ತಿ. ರಾತ್ರಿ ವೇಳೆ ಹೆದ್ದಾರಿ ಬದಿಯಲ್ಲಿ ತಮ್ಮ ಕ್ಯಾಂಟರ್ ನಿಲ್ಲಿಸಿ ಊಟಕ್ಕೆ ತೆರಳಲು ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಅಪರಿಚಿತ ವಾಹನವೊಂದು ಇವರಿಗೆ ಡಿಕ್ಕಿ ಹೊಡೆದಿದೆ.

ಅಪಘಾತ ಎಸಗಿದ ಚಾಲಕ ವಾಹನ ಸಮೇತ ಸ್ಥಳದಿಂದ ತಕ್ಷಣವೇ ಪರಾರಿಯಾಗಿದ್ದಾನೆ. ತೀವ್ರ ಗಾಯಗೊಂಡ ಜಯಪ್ರಕಾಶ್ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ದೇವನಹಳ್ಳಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ವಾಹನ ಹಾಗೂ ಸವಾರನ ಪತ್ತೆಗಾಗಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.