S Shorts

koppal | ಕೊಟ್ಟ ಮಾತಿಗೆ ತಪ್ಪದ ಜನಾರ್ದನ ರೆಡ್ಡಿ; ದೇವಸ್ಥಾನಕ್ಕೆ 20 ಗುಂಟೆ ಜಮೀನು ದಾನ ಮಾಡಿದ ಶಾಸಕ!

koppal | ಕೊಟ್ಟ ಮಾತಿಗೆ ತಪ್ಪದ ಜನಾರ್ದನ ರೆಡ್ಡಿ; ದೇವಸ್ಥಾನಕ್ಕೆ 20 ಗುಂಟೆ ಜಮೀನು ದಾನ ಮಾಡಿದ ಶಾಸಕ!
Author: Meghana Gowda
Posted By: Meghana Gowda
Updated: May 2, 2026 | 9:36 AM

ಕೊಪ್ಪಳ: ಕೊಪ್ಪಳ ತಾಲೂಕಿನ ಬುದುಗುಂಪಾ ಗ್ರಾಮದಲ್ಲಿರುವ ಕರಿಯಮ್ಮ ದೇವಸ್ಥಾನದ ಅಭಿವೃದ್ಧಿಗಾಗಿ ಶಾಸಕ ಗಾಲಿ ಜನಾರ್ದನ ರೆಡ್ಡಿ(Janardhana Reddy)  ಅವರು ತಮ್ಮ ಸ್ವಂತ ಖರ್ಚಿನಲ್ಲಿ ಲಕ್ಷಾಂತರ ರೂಪಾಯಿ ನೀಡಿ, 20 ಗುಂಟೆ ಜಮೀನು ದಾನ ಮಾಡುವ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ.

ಜನಾರ್ದನ ರೆಡ್ಡಿ ಅವರು ಲಕ್ಷಾಂತರ ರೂಪಾಯಿ ಸ್ವಂತ ಹಣವನ್ನು ವ್ಯಯಿಸಿ ಕರಿಯಮ್ಮ ದೇವಸ್ಥಾನದ ಪೂಜಾ ಕೈಂಕರ್ಯ ಹಾಗೂ ಅಭಿವೃದ್ಧಿಗಾಗಿ 20 ಗುಂಟೆ ಜಮೀನನ್ನು ಖರೀದಿಸಿ ದೇವಸ್ಥಾನಕ್ಕೆ ಹಸ್ತಾಂತರಿಸಿದ್ದಾರೆ.

ಚುನಾವಣಾ ಸಮಯದಲ್ಲಿ ನೀಡಿದ್ದ ಮಾತಿನಂತೆ ನಡೆದುಕೊಂಡ ಶಾಸಕರ ನಡೆಗೆ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಜನಾರ್ದನ ರೆಡ್ಡಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಕೃತಜ್ಞತೆ ಸಲ್ಲಿಸಿದ್ದಾರೆ.