S Shorts

ಅಜರಾಮರ ಪವರ್ ಸ್ಟಾರ್

ಅಜರಾಮರ ಪವರ್ ಸ್ಟಾರ್
Author: Devaraj Naik
Posted By: Devaraj Naik
Updated: Feb 2, 2026 | 3:28 PM

ಬಾಲ್ಯದಿ ಕಂಡ ಚಿತ್ರ-ವಿಚಿತ್ರ ಬದುಕಿನ ಹಾದಿಯಲಿ

ಅಳಿಸಲಾಗದ ಒಂದೇ ನೆನಪು ಈ ನಮ್ಮ ‘ಅಪ್ಪು’

ಇಡೀ ನಾಡ ಮೈ ನಡುಗಿಸಿ ಮರೆಯಾದ ಆ ಕರಾಳ ದಿನ

ಬೆರಗಾಗಿ ನಿಂತ ಜನತೆಗೆ ನೀ ನೀಡಿದ ಶಕ್ತಿಯೇ ಒಂದು ವರದಾನ || ೧ ||

ಬಡವ-ಬಲ್ಲವ ಎನ್ನದೆ ಸಮಾನತೆಯ ಮಂತ್ರವ ಸಾರಿದವನು

ತಾನು ಬೆಳೆದು ಪರರ ಬೆಳೆಸುವ ಕಲೆಯನು ಅರಿತವನು

ಮೂರ್ತಿ ಚಿಕ್ಕದಾದರೂ ಕೀರ್ತಿ ಶಿಖರವನ್ನೇರಿದ

ಸಾಹಸಿ ಚಿತ್ರರಂಗದ ಧ್ರುವತಾರೆಯಾಗಿ ಬೆಳಗಿದ ಪ್ರೇಮಪಾಶೀ || ೨ ||

ಸೂರ್ಯನ ಕಿರಣ ಬಿದ್ದಾಗ ವಜ್ರ ಹೊಳೆಯುವ ರೀತಿ

ನಿನ್ನ ಸರಳತೆಯೇ ಜಗಕ್ಕೆ ಸಾರಿತು

ಪ್ರೀತಿಯ ನೀತಿ ಕ್ಷಣಿಕ ಈ ಬದುಕಿನಲಿ

ಅರಿವು ಮೂಡಿಸಿದ ದಾರಿದೀಪ ಉತ್ತರ ಸಿಗದ ಪ್ರಶ್ನೆಯಾಗಿ ಉಳಿದಿದೆ ನಿನ್ನ ಈ ರೂಪ || ೩ ||

ಬೆಳೆದು ನಿಂತರೂ ಕುಗ್ಗದ ನಿನ್ನ ಆ ಚೊಕ್ಕ ಮನಸ್ಸು

ನೂರು ಜನರಿಗೆ ಬದುಕ ನೀಡಿದ ಸಾಕಾರದ ಕನಸು

ನಾಣ್ಯದ ಎರಡು ಮುಖದಂತೆ ಬದುಕಿನ ವ್ಯತ್ಯಾಸವ ಅರಿತೆ

ಆಕಾಶ-ಭೂಮಿಯ ನಡುವೆ ಅಚ್ಚಳಿಯದ ಪ್ರೇಮವ ಬರೆದೆ || ೪ ||

ಸತ್ಯಮೇವ ಜಯತೆ ಎಂದೂ ನಿನ್ನ ಬದುಕಿನ ಉಸಿರು

ಚಿಕ್ಕ ಸಸಿ ಹೆಮ್ಮರವಾಗಿ ನೀಡಿತು ನೂರಾರು ಆಸರೆ

ಹತ್ತಿದ ದೀಪವ ಬಿರುಗಾಳಿ ಆರಿಸಿದ ದೈವದ ಆಟ

ವಿಧಿಯ ಅಲೆಗೆ ಬಂಡೆ ಅಪ್ಪಳಿಸಿ ನಿಂತಿತು ಬದುಕಿನ ಪಾಠ || ೫ ||

ಸಣ್ಣವರಿಂದ ದೊಡ್ಡವರವರೆಗೂ ಸವಿನೆನಪಿನ ಹೂಮಳೆ

ನಿನ್ನ ನಗುವಿಲ್ಲದೆ ಬರಿದಾಯಿತಲ್ಲಾ ಈ ಬಣ್ಣದ ಶಾಲೆ

‘ಪವರ್’ ಎಂಬ ಪದಕ್ಕೆ ಉತ್ತರ ಸಿಗದ ಪ್ರಶ್ನೆಯಾಗಿ ಉಳಿದೆ

ಕಾಣದ ಲೋಕಕ್ಕೆ ಹಾರಿ ಹೋಗಿ ನಕ್ಷತ್ರವಾಗಿ ಅರಳಿದೆ || ೬ ||

ಕವನ ರಚನೆ:

ಕರಬಸಪ್ಪ ಆರ್. ನಾಗಮ್ಮನವರ, (ಸದಸ್ಯರು) ಸಾ|| ಅಗಡಿ, ತಾ|| ಜಿ|| ಹಾವೇರಿ ಕಸ್ತೂರಿ ಸಿರಿಗನ್ನಡ ವೇದಿಕೆ (ರಿ), ರಾಜ್ಯ ಘಟಕ ಮಂಡ್ಯ